Saturday, August 29, 2009

Love Song of Alfred Prufrock

T S Eliot ಬರೆದಿರುವ ಈ ಕವನ ಯಾವಾಗಲು ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು
ನನಗೆ ಈ ವಾಕ್ಯ ಈ ಕವಿತೆ ಯಲ್ಲಿ ಬಹಳ ಇಷ್ಟವಾಯ್ತು
"I measured my life with the butt ends of smoked cigarettes"

ಮೊದಲನೆ Stanza ಈ ರೀತಿ ಇರಬಹುದಾ ?

for original version

http://www.bartleby.com/198/1.html



ನಡೆ ಹೋಗೋಣ ಮತ್ತೆ, ನಲ್ಲೆ ನೀನು ನಾನು,
ಮರಣದಂಚಿನಲಿ ಮಲಗಿರುವ ರೋಗಿಯ ಮುಖದಂತೆ,
ಸಂಜೆಯ ಹಳದಿ ಬಾಹುಗಳು ಆಕಾಶವನ್ನಾಕ್ರಮಿಸಿರುವಾಗ
ನಡೆ ಹೋಗೋಣ, ಬರಡಾದ ಹಾದಿಯಲಿ,
ಪಿಸುಮಾತುಗಳು ರಂಜಿಸಲಿ.
ವಿಶ್ರಾಂತಿಯಿಲ್ಲದ ರಾತ್ರಿಯ, ಕತ್ತಲ ಕೋಣೆಯಲಿ,
ತುಕ್ಕು ಹಿಡಿದ ಕಿಟಕಿಗಳಿರುವ ಉಪಹಾರ ಮಂದಿರದಲಿ,
ಬೇಸರ ತರಿಸುವ ಚರ್ಚೆಗಳಂತೆ ಕಾಣುವ ಆ ಹಾದಿಗಳಲಿ,
ನೋವು ತುಂಬಿರುವ ಉದ್ದೇಶಗಳೇ
ನಿನ್ನಲ್ಲಿ ಮೂಡುವ ಆ ಪ್ರೆಶ್ನೆ...
ಓ, ಕೇಳಬೇಡ 'ಏನೆಂದು'
ನಡೆ ಹೋಗೋಣ ಅಲ್ಲಿ, ಹೋಗಿ ನೋಡೋಣ.
ಆ ಕೋಣೆಯಲಿ, ಎಲ್ಲ ಮಹಿಳೆಯರು
ಮೈಕೆಲೊಂಜಲೊ ನ ಬಗ್ಗೆ ಮಾತನಾಡಲು ಬರುವರೊ

(ಮುಂದುವರಿಯುವುದು)